Image 1
Image 2
Image 3
Image 4
Image 5
Image 6
Image 7
Image 8
Image 9
Image 10
Image 11
Image 12
Image 13
Image 14
Image 16
Image 16

ಭಾನುವಾರ, ಆಗಸ್ಟ್ 16, 2020

ದ್ವಿತೀಯ ಪಿ ಯೂ ಸಿ ಯೂಟ್ಯೂಬ್ ವಿಡಿಯೋ

 ದ್ವಿತೀಯ ಪಿ ಯೂ ಸಿ ಯೂಟ್ಯೂಬ್ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

 74ನೇ ಸ್ವಾತಂತ್ರ್ಯ ದಿನಾಚರಣೆ ಸರಳ ಆಚರಣೆ

 ಶನಿವಾರ ನಮ್ಮ ಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಶ್ರೀರಂಗಪಟ್ಟಣ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀ ಸಂತೋಷ್ ಅವರು ನೆರವೇರಿಸಿದರು. ದೇಶಾದ್ಯಂತ ಕೋವಿಡ್ ಹೆಚ್ಚಾಗಿರುವ ಕಾರಣ ವಿದ್ಯಾರ್ಥಿಗಳು ಮನೆಯಲ್ಲೇ ಪಾಠ ಕಲಿವಂತಾಗಿದೆ. ಆದಷ್ಟು ಬೇಗ ಈ ಮಾರಕ ರೋಗಕ್ಕೆ ಲಸಿಕೆ ಕಂಡುಹಿಡಿದು ರೋಗನಿವಾರಣೆ ಆಗಲಿ ವಿದ್ಯಾರ್ಥಿಗಳು ಮತ್ತೆ ಶಾಲೆಯಲ್ಲಿ ಪಾಠ ಕಲಿಯುವಂತಾಗಲಿ ಎಂದರು. ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾದ ರವಿ ರವರು ಸ್ವಾತಂತ್ರೋತ್ಸವದ ಶುಭಾಶಯ ಕೋರಿದರು. ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್ ಕೆ ಆರ್ ಅವರು ಶಾಲೆಯ ಫಲಿತಾಂಶ  ಪ್ರತಿವರ್ಷ ಉತ್ತಮಗೊಳ್ಳುತ್ತಿದೆ ಇದಕ್ಕೆ ಕಾರಣವಾದ ಶಾಲೆಯ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸ್ಮರಿಸಿದರು .ಪ್ರಥಮ ವರ್ಷದಲ್ಲಿಯೇ ಆಂಗ್ಲಮಾಧ್ಯಮದಲ್ಲಿ 100ಕ್ಕೆ 100 ಫಲಿತಾಂಶ ಬಂದಿರುವುದು ಮತ್ತಷ್ಟು ಕಾರ್ಯ ಮಾಡಲು ಉತ್ಸಾಹ ಮೂಡಿದೆಂದರು.ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದವರು.ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನ ವಿತರಣೆ ಮಾಡಿದ್ದು ಹೆಚ್ಚು ಸಹಾಯಕವಾಯಿತೆಂದರು.


ಶಾಲೆಯ ಅಭಿವೃದ್ಧಿಗೆ ಶ್ರೀರಂಗಪಟ್ಟಣದ ಶಾಸಕರಾದ ಶ್ರೀ ರವೀಂದ್ರ ಶ್ರೀಕಂಠಯ್ಯ ನವರು ನಾಲ್ಕು ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸೂಚಿಸಿದ್ದು ಆ ಕಾರ್ಯ ಪ್ರಗತಿಯಲ್ಲಿದೆಂದರು. ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಗಳಾದ ಶ್ರೀ ಕಿಶೋರ್ ರವರು ಸ್ವಾತಂತ್ರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳಲ್ಲಿ ಕಲಿಯುವ ಮನೋಭಾವನೆ ಇಲ್ಲವಾಗಿದೆ. ಅಂತಹ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಕಲಿಕೆ ಒಳಪಡಿಸುವ ಕಾರ್ಯಕ್ರಮವನ್ನ ರೂಪಿಸಲಾಗುವೆಂದರು. ಸಂಘದಲ್ಲಿ 80 ಸ್ವಯಂಸೇವಾ ಸದಸ್ಯರಿದ್ದು ಸಂಘವು ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸದಾ ಸಿದ್ಧವಿದೆ ಎಂದರು.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲಿಂಗರಾಜ್ ಅವರು ಅತಿಥಿಗಳನ್ನು ಜನತೆಯ ಪರವಾಗಿ ಸ್ವಾಗತಿಸಿದರು.ಶ್ರೀಕಂಠ ಎಚ್ ಡಿ ಶಿಕ್ಷಕರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು ಸಂಘದ ವತಿಯಿಂದ ಅತಿಥಿಗಳಿಗೆ, ಗ್ರಾಮಸ್ಥರಿಗೆ ತಿಂಡಿ ವ್ಯವಸ್ಥೆಯನ್ನುಮಾಡಲಾಗಿತ್ತು

ಇದೇ ಸಂದರ್ಭದಲ್ಲಿ ನಮ್ಮ ಶಾಲೆಯ ಬ್ಲಾಗ್ ಅನ್ನು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀ ಸಂತೋಷ್ ರವರು ಲೋಕಾರ್ಪಣೆ ಮಾಡಿದರು https://kpsarakere.blogspot.com/ ಶಾಲಾ ಎಸ್ ಡಿ ಎಂ ಅಧ್ಯಕ್ಷ ರಾದ ರವಿಯವರು ಹಾಗೂ  ಪ್ರಾಂಶುಪಾಲರಾದ ಶ್ರೀ ಲಿಂಗರಾಜುರವರು , ಉಪಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಆರ್ ರವರು , ಹಾಗೂ ಕಾಲೇಜಿನ ಉಪನ್ಯಾಸಕ ವರ್ಗ , ಪ್ರೌಢಶಾಲಾ ಶಿಕ್ಷಕರು , ಹಿರಿಯ ವಿದ್ಯಾರ್ಥಿಗಳು ಸಂಘದ ಕಾರ್ಯದರ್ಶಿ ಶ್ರೀ ಕೀಶೋರ್ ರವರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಬ್ಲಾಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ರಾಜ್ಯದ  ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪ್ರೌಢಶಾಲೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಸಂಪನ್ಮೂಲಗಳನ್ನು ಒಂದೇ ಕಡೆ ಒದಗಿಸುವ ನಿಟ್ಟಿನಲ್ಲಿ ಈ ಬ್ಲಾಗನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ರಚಿಸಲಾಗಿದೆ. ಈ ಬ್ಲಾಗಿನಲ್ಲಿರುವ ಸಂಪನ್ಮೂಲಗಳು ರಾಜ್ಯದ ವಿವಿಧ ಕ್ರಿಯಾಶೀಲ ಸಂಪನ್ಮೂಲ ಶಿಕ್ಷಕರು ತಯಾರಿಸಿದ್ದು, ಅವರಿಗೆ ಧನ್ಯವಾದಗಳು ತಿಳಿಸುತ್ತೇನೆ. 




ಹಿರಿಯ ವಿದ್ಯಾರ್ಥಿ ಸಂಘ

 

ಹಿರಿಯ ವಿದ್ಯಾರ್ಥಿ ಸಂಘ coming soon